ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕನ್ನಡದ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ವಿಷ್ಣು ಸ್ಮಾರಕದ ವಿವಾದವನ್ನ ಬಗೆಹರಿಸುವ ಬಗ್ಗೆ ಸಿಎಂ ಜೊತೆ ಮಾತನಾಡಿದ ಸುದೀಪ್ 4 ಪ್ರಮುಖ ಸಲಹೆಗಳನ್ನ ಸರ್ಕಾರಕ್ಕೆ ನೀಡಿದ್ದಾರೆ. ಸುದೀಪ್ ಹಾಗೂ ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಅವರು ನೀಡಿರುವ ಈ ಸಲಹೆಗಳನ್ನ ಸರ್ಕಾರ ಅನುಸರಿಸಿದ್ದಲ್ಲಿ, ವಿಷ್ಣು ಸ್ಮಾರಕ ವಿವಾದ ಅಂತ್ಯವಾಗಿ ಸ್ಮಾರಕ ನಿರ್ಮಾಣ ಕಾರ್ಯ ಸುಗಮವಾಗಬಹುದು ಎಂಬ ಆಶಯ ಕಿಚ್ಚ ಸುದೀಪ್ ಅವರದ್ದು.ಇದರ ಜೊತೆಗೆ ಸುದೀಪ್ ಅವರು ಕೆಲವು ಮನವಿಯನ್ನ ಕೂಡ ಮಾಡಿದ್ದಾರೆ. ಹಾಗಿದ್ರೆ, ಸರ್ಕಾರಕ್ಕೆ ಸುದೀಪ್ ನೀಡಿರುವ ಆ ಸಲಹೆಗಳೇನು? ಸಲಹೆ-1: ಅಭಿಮಾನ್ ಸ್ಟುಡಿಯೋದಲ್ಲಿ ಸರ್ಕಾರ ನೀಡಿರುವ ಎರಡು ಎಕರೆ ಬದಲು, ಒಂದು ಅಥವಾ ಅರ್ಧ ಎಕರೆ ಜಾಗವನ್ನ ಮಂಜೂರು ಮಾಡುವುದು. <br /> <br />Kannada Actor Sudeep met chief minister Siddaramaiah and discuss about dr vishnuvardhan memorial. and he gave some tips to siddaramiha